ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಇಲ್ಲಿನ ಭೂ ಪ್ರದೇಶ ಮತ್ತು ಬಂಡೆಗಳು ಇಡೀ ವಿಶ್ವದಲ್ಲಿ ಅಪರೂಪವಾದದ್ದು. ಪೆಸಿಫಿಕ್ ಸಾಗರ ನೈರುತ್ಯ ಮೂಲೆಯಲ್ಲಿ ಇರುವ ಈದ್ವೀಪ ಅಂಟಾರ್ಟಿಕಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಹಂಚಿ ಹೋಗಿದೆ.
1810ರಲ್ಲಿ ಫ್ರೆಡರಿಕ್ ಹ್ಯಾಸಲ್ ಬರೋ ಎಂಬಾತನಿಂದ ಪತ್ತೆಯಾದ ದ್ವೀಪವಿದು. ಸೀಲ್ ಗಳ ಭೇಟೆಗೆ ಹೊರಟಿದ್ದ ಹ್ಯಾಸಲ್ ಗೆ ಈ ದ್ವೀಪ ಕಂಡಿದ್ದೆ ಇದು ಬ್ರಿಟನ್ನಿಗೆ ಸೇರಿದ್ದೆಂದು ಹೇಳಿದ. ನಂತರ ನ್ಯೂ ಸೌತ್ ವೇಲ್ ನ ಗವರ್ನರ್ ಆಗಿದ್ದ ಕರ್ನಲ್ ಲ್ಯಾಂಚ್ಲನ್ ಮ್ಯಾಕ್ವೈರ್ ಹೆಸರಡಿಲಾಯಿತು.
ಭೂಮಿಯ ವಿಕಾಸ, ಇತಿಹಾಸದ ಅನೇಕ ಅಧ್ಯಾಯಗಳನ್ನು ಈ ದ್ವೀಪ ಒದಗಿಸುತ್ತದೆ. ಭೂಖಂಡಗಳ ಅಲೆತ ಸಿದ್ಧಾಂತಗಳಿಗೆ ಪುರಾವೆಗಳು ಇಲ್ಲಿ ಸಿಕ್ಕಿವೆ. ಈ ದ್ವೀಪ ಕಡಲ ಹಕ್ಕಿ ಪೆಂಗ್ವಿನ್‌ಗಳ ಸ್ವರ್ಗವೂ ಹೌದು. ಸಮೀಕ್ಷೆಯೊಂದರ ಪ್ರಕಾರ ಇಲ್ಲಿ ಸುಮಾರು ೮.೫ ಲಕ್ಷ ಜೊತೆ ಪೆಂಗ್ವಿನ್ ಹಕ್ಕಿಗಳೂ ವಾಸವಾಗಿವೆ. ಪೆಂಗ್ವಿನ್ ಗಳ ಸಾಕಣೆ ಇಲ್ಲಿನ ಮುಖ್ಯ ಉದ್ಯಮ.

೧೯೯೭ರಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮಾಕ್ವೈರ್ ದ್ವೀಪದ ಹೆಸರು ಸೇರಿಸಲಾಯಿತು.