ಇದು ಅಪೂರ್ವ, ಅನುಪಮ...
ಸ್ಟ್ರೂವೆ ಕಮಾನು ಹಾದು ಹೋಗುವ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಲಾಟ್ಬಿಯಾವೋ ಸೇರಿದೆ. ಬೆಲಾರಸ್್, ಈಸ್ಟೋನಿಯಾ, ಫಿನ್ಲೆಂಡ್, ಲಿಥುವೇನಿಯಾ, ನಾರ್ವೆ, ಮಾಲ್ಡೋವ ಗಣರಾಜ್ಯ, ರಷ್ಯನ್ ಒಕ್ಕೂಟ ಸ್ವೀಡನ್್ ಹಾಗೂ ಉಕ್ರೇನ್ ಇತರ ರಾಷ್ಟ್ರಗಳು. ಫ್ರೆಡ್ರಿಕ್ ಜಾರ್ಜ್ ವಿಲ್ ಹೆಲ್ಮ್ ಸ್ಟ್ರೂವೆ ಎಂಬಾತ 1816ರಿಂದ 1855ರ ಅವಧಿಯಲ್ಲಿ ನಡೆಸಿದ ಸಮೀಕ್ಷೆಯ ಕೇಂದ್ರಗಳಿವು. 2829 ಕಿ.ಮೀ. ಉದ್ದವಿರುವ ಈ ಸಮೀಕ್ಷಾ ಹಾದಿ, ಭೂಗ್ರಹದ ಆಕಾರ, ಗಾತ್ರ, ರಚನೆಯನ್ನು ಅರಿಯುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆ. ಈ ಕಮಾನು 259 ತ್ರಿಕೋನಗಳನ್ನು 265 ಮುಖ್ಯ ಕೇಂದ್ರಬಿಂದುಗಳನ್ನು ಒಳಗೊಂಡಿದೆ. ವೈಜ್ಞಾನಿಕ ಸಾಧನೆಯೊಂದಕ್ಕೆ ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಮತ್ತು ಆಯಾಯಾ ಏಕಚಕ್ರಾಧಿಪತ್ಯಕ್ಕೊಳಪಟ್ಟ ರಾಷ್ಟ್ರಗಳು ಕೈಜೋಡಿಸಿದ ಅಪರೂಪದ ನಿದರ್ಶನ ಈ ಸಮೀಕ್ಷಾ ಕಾರ್ಯ. ಭೂವಿಜ್ಞಾನದ ಅಭಿವೃದ್ಧಿಯಲ್ಲಿ ಈ ಬೆಳವಣಿಗೆ ಪ್ರಮುಖ ಪಾತ್ರವಹಿಸಿದೆ ಎನ್ನುತ್ತಾರೆ ವಿಜ್ಞಾನಿಗಳು.
No comments:
Post a Comment