Saturday, May 31, 2008

ವಿಶ್ವದ ಅತಿ ಪುರಾತನ ಆವಾಸ ಸ್ಥಾನ

ಲೆಬನಾನ್ ದೇಶದ ಬೈಬ್ಲೋಸ್ ವಿಶೇಷತೆಗಳ ಸ್ಥಳ. ನವಶಿಲಾಯುಗದ ಮಾನವರ ವಾಸಸ್ಥಾನವಾಗಿದ್ದ ಈ ಸ್ಥಳ ನಾಗರಿಕತೆಗಳನ್ನೂ ಕಂಡ ಪುರಾತನ ನಗರ. ಗ್ರೀಕರು ಇದನ್ನು ಗುಬ್ಲಾ ಎನ್ನುತ್ತಿದ್ದರು. ಫೀನಿಷ್ ಇತಿಹಾಸಕಾರ ಸಾನ್ ಖುನಿಯಾಥನ್ ಪ್ರಕಾರ ಟ್ರೋಜನ್ ಯುದ್ಧ ಪೂರ್ವದಲ್ಲೇ ನಿರ್ಮಾಣವಾದ ಮೊದಲ ನಗರವಿದು. ನಿರಂತರ ಆವಾಸ ಸ್ಥಾನವಾಗಿರುವ ವಿಶ್ವದ ಪ್ರಾಚೀನ ತಾಣ. ಕ್ರಿಸ್ತಪೂರ್ವ 5000 ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡಗಳು 1920ರಲ್ಲಿ ನಂತರ ನಡೆದ ಉತ್ಖನನಗಳಿಂದ ಬಯಲಿಗೆ ಬಂದಿವೆ ತೋತ್ ಎಂಬಾತ ಬರವಣಿಗೆಯನ್ನು ಕಂಡುಕೊಂಡಿದ್ದು ಇದೇ ನೆಲದಲ್ಲಿ ಎನ್ನಲಾಗಿದೆ. ರೋಮನ್ನರು, ಫೀನಿಷಿಯನ್ನರು, ಪರ್ಷಿಯನ್ನರ ಕಾಲದಲ್ಲಿ ಸುತ್ತಲ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಬೆಳೆಸಿಕೊಂಡು ಸದಾ ಅಭಿವೃದ್ಧಿ ಕಂಡ ನಗರವಿದು.

No comments: