Saturday, May 31, 2008

ರಿಗಾ ಎಂಬ ಐತಿಹಾಸಿಕ ನಗರ
ಲಾಟ್ವಿಯಾ ದೇಶದ ರಿಗಾ ನಗರ ಐತಿಹಾಸಿಕ ಕೇಂದ್ರವೆಂದು ಗುರುತಿಸಿಕೊಂಡಿದೆ. 13 ಮತ್ತು 15ನೇ ಶತಮಾನದಲ್ಲಿ ಮಧ್ಯ ಹಾಗೂ ಪೂರ್ವ ಯುರೋಪಿನ ವಾಣಿಜ್ಯ ಕೇಂದ್ರವಾಗಿತ್ತು. ಬಾಲ್ಟಿಕ್ ಸಮುದ್ರದ ಕರಾವಳಿಗೆ ಹೊಂದಿಕೊಂಡಿರುವ ಈ ನಗರ ವಿಶೇಷವಾದದ್ದು. ಬಾಲ್ಟಿಕ್ ಸಾಗರ ಪ್ರದೇಶದಲ್ಲೇ ಅತಿದೊಡ್ಡ ನಗರವಿದು. ಇಲ್ಲಿ ಡೋಮ ಕ್ಯಾಥೆಡ್ರೆಲ್ ಈ ಭಾಗದಲ್ಲಿರುವ ಅತಿದೊಡ್ಡ ಚರ್ಚ್. ಅಲ್ಲದೇ ಇಲ್ಲಿನ ಕಟ್ಟಡಗಳೂ ವಿಶೇಷ. ನವಸಂಪ್ರದಾಯ ಶೈಲಿಯ ವಾಸ್ತುಶಿಲ್ಪವನ್ನು ಅಳವಡಿಸಿಕೊಂಡಿರುವ ಈ ಕಟ್ಟಡಗಳಿಗೆ ಕಟ್ಟಿಗೆ ಬಳಸಾಗಿದ್ದು, ಅವುಗಳದ್ದೇ ವಿಶೇಷ ಮೆರುಗು. ರಿಗಾದಲ್ಲಿ ನೋಡುವುದಕ್ಕೆ ಬೇಕಾದಷ್ಟು ವಿಶೇಷಗಳಿವೆ. ವಾಸ್ತುಶಿಲ್ಪದ ಬಯಲು ಸಂಗ್ರಹಾಲಯ, ಯುದ್ಧ ವಸ್ತು ಸಂಗ್ರಹಾಲಯ, ವಿವಿಧ ದೇಶಗಳ ಕಲೆಯನ್ನು ಬಿಂಬಿಸುವ ಸಂಗ್ರಹಾಲಯಗಳಿವೆ.

No comments: