ಹವಳದ ಮನೆಗಳು...
ಕೀನ್ಯಾದ ಲಾಮು ಎಂಬ ಪುರಾತನ ಪಟ್ಟಣಕ್ಕೆ ಕಾಲಿಟ್ಟರೆ ನಿಮಗೆ ಅಲ್ಲಲ್ಲಿ ಹವಳ ಮತ್ತು ಬೀಟೆ ಮರದಿಂದ ಕಟ್ಟಿದ ಮನೆಗಳು ಕಾಣಸಿಗುತ್ತವೆ. ಇಲ್ಲಿನ ಮನೆಗಳೇ ಆಕರ್ಷಕ. ಸುಂದರ ಕೆತ್ತನೆಗಳಿರುವ ಕಟ್ಟಿಗೆಯಿಂದ ಕೆತ್ತಲಾದ ಮರದ ಬಾಗಿಲುಗಳು, ಸರಳವಾಗಿದ್ದೂ ಆಕರ್ಷಿಸುವ ಕೋರ್ಟ್ ಯಾರ್ಡ್ ಗಳು ಲಾಮು ಪಟ್ಟಣದ ವೈಶಿಷ್ಟ್ಯಗಳು. 19ನೇ ಶತಮಾನದಿಂದ ಇದು ಮುಸ್ಲಿಂ ಧರ್ಮದ ಹಬ್ಬ, ಉತ್ಸವಗಳ ಪ್ರಮುಖ ಕೇಂದ್ರವಾಗಿದೆ. ಇಸ್ಲಾಮ್್ ಹಾಗೂ ಸ್ವಾಹಿಲಿ ಸಂಸ್ಕೃತಿಗಳ ಅಧ್ಯಯವ ಕೇಂದ್ರವೂ ಹೌದು. ಲಾಮು ಹೆಸರಿನ ದ್ವೀಪದಲ್ಲಿರುವ ಈ ಪಟ್ಟಣ ಇತರೆ ಪಟ್ಟಣಗಳ ಪೈಕಿ ಅತಿ ದೊಡ್ಡದು. 14ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಲಾಮು ಸ್ವಾಹಿಲಿ ವಾಸ್ತುಶೈಲಿಯನ್ನು ಬಿಂಬಿಸುವ ಸ್ಥಳಗಳಲ್ಲಿ ಪ್ರಮುಖವಾದದ್ದು. ಒಂದು ಕಾಲದಲ್ಲಿ ಗುಲಾಮರ ಮಾರಾಟ ಕೇಂದ್ರವಾಗಿತ್ತು.