Saturday, May 31, 2008

ಬೆಕಾ ಕಣಿವೆಯ ಅಂಜೂರ

ಲೆಬನಾನ್ ದೇಶದ ಝಾಹ್ಲೆ ಜಿಲ್ಲೆಯ ಅಂಜಾರ್ ( ಇದೇ ಹೆಸರಿನ ಊರು ಭಾರತದ ಗುಜರಾತ್ ನಲ್ಲೂ ಇದೆ) ನಗರ ಅಂಜೂರದಂತೆ ಚಿಕ್ಕದಾಗಿದೆ. 12 ಶತಮಾನಗಳ ಇತಿಹಾಸವಿರುವ ಈ ನಗರ ಅಲ್ಲಲ್ಲಿ ಹಾಳು ಬಿದ್ದಂತಿದೆ. ಹಾಗೆ ಹಾಳು ಬಿದ್ದಂತೆ ಕಾಣುವ ಪ್ರದೇಶವಿದೆಯಲ್ಲ, ಅದು ಕ್ರಿಸ್ತಶಕ 8-9ನೇ ಶತಮಾನದಲ್ಲಿ ಕಟ್ಟಿದ ಅರಮನೆ ಮತ್ತಿತರ ಕಟ್ಟಡಗಳ ಅವಶೇಷ. ಒಂದನೇ ಕಾಲಿಫ್ ವಾಲಿದ್ ನಿಂದ ನಿರ್ಮಾಣಗೊಂಡ ಅಂಜಾರ್ ನಗರ ಸಿರಿಯನ್ ಸೇನೆಯ ನೆಲೆಯಾಗಿತ್ತು. ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿತ್ತು. ಕಾಲಾನಂತರ ಮರು ಜೀವ ಪಡೆದುಕೊಂಡ ನಗರ 8500 ಮಂದಿಗೆ ನೆಲೆ ನೀಡಿದೆ. ಬೇಸಿಗೆಯಲ್ಲಿ ಇಲ್ಲಿನ ಜನ ಸಂಖ್ಯೆ 13 ಸಾವಿರಕ್ಕೆ ಹೆಚ್ಚುತ್ತದೆ. ಕಾರಣ ಬೇರೆ ಬೇರೆ ಭಾಗಗಳಲ್ಲಿ ವಾಸಿಸುವ ಊರಿನ ಜನ, ಅವರ ಬಂಧು ಬಾಂಧವರು ಬೇಸಿಗೆಗೆ ಇಲ್ಲಿಗೆ ಬರುತ್ತಾರೆ.

No comments: