ಕೀನ್ಯಾ ಒಂದು ಗಣರಾಜ್ಯ. ಆಫ್ರಿಕದ ಮಡಿಲಲ್ಲಿರುವ ಇದು ಒಂದು ಕಾಲದಲ್ಲಿ ವಸಾಹತುಷಾಹಿಗಳ ತೆಕ್ಕೆಯಲ್ಲಿತ್ತು. ಉಗಾಂಡಾ, ತಾನ್ಜೇನಿಯಾ, ಇಥಿಯೋಪಿಯಾ, ಸೊಮಾಲಿಯಾ ಎಂಬ ಶತಮಾನಗಳ ಶಾಪ ಹೊತ್ತಂತಿರುವ ದೇಶಗಳಿಂದ ಸುತ್ತುವರಿದೆ ಈ ಕೀನ್ಯಾ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ನೆಲದ ಸಂಸ್ಕೃತಿ, ಪರಂಪರೆ ಮತ್ತು ವಿಶೇಷಗಳ ಇಣುಕು ನೋಟ.....
ಬಯಲು ಪ್ರಯೋಗಾಲಯ

ಕೀನ್ಯಾದಲ್ಲಿರುವ ಟರ್ಕನಾ ರಾಷ್ಟ್ರೀಯ ಉದ್ಯಾನವನ್ನು ಹೀಗೂ ಕರೆಯಬಹುದು. ದಕ್ಷಿಣ ಆಫ್ರಿಕದ ಅತಿ ದೊಡ್ಡ ಸರೋವರವನ್ನು ಹೊಂದಿರುವ ಈ ಉದ್ಯಾನ ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಸಮುದಾಯವನ್ನು ಹೊಂದಿದೆ. ತನ್ನೊಳಗೆ ಇನ್ನೆರಡು ರಾಷ್ಟ್ರೀಯ ಉದ್ಯಾನಗಳನ್ನು ಒಳಗೊಂಡಿರುವುದು ಮತ್ತೊಂದು ವಿಶೇಷ. ಅಂದ ಹಾಗೆ ಇಲ್ಲಿ ನೈಲ್ ಹೆಸರಿನ ಮೊಸಳೆ, ಅಪರೂಪದ ನೀರಾನೆ, ವಿವಿಧ ಜಾತಿಯ ವಿಷದ ಹಾವುಗಳು ಕಾಣಸಿಗುತ್ತವೆ. ದೂರ ದೂರದ ಪ್ರದೇಶಗಳಿಗೆ ವಲಸೆ ಹೋಗುವ ಅಸಂಖ್ಯ ಹಕ್ಕಿಗಳಿಗೆ ಇದೊಂದಿ ನಿಲುಗಡೆ ಸ್ಥಳವೂ ಹೌದು. ಉದ್ಯಾನದ ವ್ಯಾಪ್ತಿಯಲ್ಲಿರುವ ಕೂಬಿ ಫೋರಾ ಭಾಗದಲ್ಲಿ ಮೃದ್ಬಂಗಿಗಳು, ಸಸ್ತನಿಗಳ ಪಳೆಯುಳಿಕೆಯ ಗಣಿಯೇ ಇದೆ. ಹೀಗಾಗಿ ಇಲ್ಲಿ ಅಧ್ಯಯನ, ಸಂಶೋಧನೆ ನಡೆಯುತ್ತಲೇ ಇರುತ್ತವೆ. ಇದೊಂದು ಪ್ರಯೋಗಾಲಯವಾಗಿದೆ.
No comments:
Post a Comment