ದೊರೆಗಳ ಊರು

ಲುಮಾಂಗ್ ಪ್ರಬಾಂಗ್ ಲಾವೋ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ನಗರದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ವಾಸ್ತುಶೈಲಿಯ ಸಂಯೋಜನೆಯನ್ನು ಕಾಣಬಹುದು. 19 ಮತ್ತು 20ನೇ ಶತಮಾನದಲ್ಲಿ ಈ ಭಾಗದಲ್ಲಿ ಅಸ್ತಿತ್ವದಲ್ಲಲಿದ್ದ ಯುರೋಪಿಯನ್ ವಸಾಹತುಶಾಹಿ ಅವಧಿಯಲ್ಲಿ ಎರಡು ಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಮ್ಮಿಲನವಾಗಿದ್ದು. ಅದು ಇಲ್ಲಿನ ವಾಸ್ತುಶೈಲಿಯಲ್ಲಿ ಎದ್ದು ಕಾಣುತ್ತದೆ. ಮುವಾಂಗ್ ಸೂ ಎಂಬುದು ಇದರ ಹಳೆಯ ಹೆಸರು. ಕ್ರಿಸ್ತಶಕ 698ರಲ್ಲಿ ಥೈ ದೊರೆ ಖುನ್ ಲೋನಿಂದ ಆಕ್ರಮಣಕ್ಕೊಳಗಾಗಿ ಸಾಮ್ರಾಜ್ಯವೊಂದು ಇಲ್ಲಿ ಸ್ಥಾಪನೆಯಾಯಿತು. ಹೀಗೆ ನೂರಾರು ದೊರೆಗಳನ್ನು ಕಂಡು ಪ್ರಬಾಂಗ್ ಒಂದು ಐತಿಹಾಸಿಕ ನಗರವಾಗಿಯೂ ಬೆಳೆಯಿತು.
No comments:
Post a Comment