ಕೀನ್ಯಾ ಪುರಾತನ ಪರ್ವತ

ಆಫ್ರಿಕ ಖಂಡದ ಎರಡನೇ ಅತಿ ಎತ್ತರದ ಪರ್ವತವಿದು. ಹಾಗೆಯೇ ಇಲ್ಲಿರುವ ಪರ್ವತಗಳ ಪೈಕಿ ಅತಿ ಹಳೆಯದು. ಕೀನ್ಯಾದ ಮೆರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಿದು ಒಂದು ಕಾಲದಲ್ಲಿ ಜ್ಬಾಲಾಮುಖಿ ಪರ್ವತ. ಮುಪ್ಪಾಗಿರುವಂತೆ ತಣ್ಣಗಾಗಿದೆ. ಅಷ್ಟೇ ಏಕೆ ಕುಗ್ಗಿಯೂ ಹೋಗಿದೆ. ವಿಜ್ಞಾನಿಗಳ ಪ್ರಕಾರ 2.6ಮಿಲಿಯನ್್ ವಷಱಗಳ ಹಿಂದೆ ಇದು ಸುಮಾರು 6200 ಮೀಟರ್ ಎತ್ತರವಿತ್ತಂತೆ. ಕ್ರಮೇಣ ಕಡಿಮೆಯಾಗುತ್ತಾ ಬಂದು ಈಗ ಇದರ ಎತ್ತರ 5199 ಮೀಟರ್. ಈ ಪರ್ವತ ಪ್ರದೇಶದಲ್ಲಿ ನೀರ್ಗಲ್ಲುಗಳು, ಕಣಿವೆಗಳು, ಇಳಿಜಾರು ಪ್ರದೇಶಗಳಿದ್ದು, ಆಫ್ರಿಕ ಖಂಡದ ಅತ್ಯಂತ ಪ್ರಭಾವಶಾಲಿ, ಆಕರ್ಷಕ ಪ್ರದೇಶವೂ ಆಗಿದೆ. ಪರ್ವತ ಸುತ್ತಲೂ ಸಂರಕ್ಷಿತ ಅರಣ್ಯವಿದ್ದು, 60 ವರ್ಷಗಳ ಹಿಂದೆಯೇ ಇದನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಗಿತ್ತು.
No comments:
Post a Comment