Saturday, May 31, 2008

ಬೆಕಾ ಕಣಿವೆಯ ದೇವರು"ಬಾಲ್ಬೇಕಾ"
ಲೆಬನಾನ್ ಬಾಲ್ಬೇಕಾ ಫಿನಿಷಿಯನ್ ನಗರ. ರೋಮನ್ ವಾಸ್ತುಶೈಲಿಯನ್ನು ಬಿಂಬಿಸುವ ಅನೇಕ ಪುರಾತನ ಕಟ್ಟಡಗಳ ಅವಶೇಷಗಳು ಇಲ್ಲಿ ಕಾಣಸಿಗುತ್ತವೆ. ಧಾರ್ಮಿಕವಾಗಿ ಹೆಚ್ಚು ಗುರುತಿಸಿಕೊಂಡಿರುವ ಬಾಲ್ಬೇಕಾ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ. ಹೆಲಿಪೊಟಿನ್ ಜುಪಿಟರ್ ಬಾಲ್ ಪ್ರಮುಖ ತೀರ್ಥ ಕ್ಷೇತ್ರ. 1898ರಲ್ಲಿ ಇಲ್ಲಿ ಜರ್ಮನಿಯ ಪ್ರಾಚ್ಯವಸ್ತುಸಂಶೋಧಾನ ತಂಡಗಳು ಇಲ್ಲಿ ಉತ್ಖನನ ಆರಂಭಿಸಿದವು. ಈ ತಂಡಗಳಿಗೆ ಬಕಾಸ್ ದೇವಸ್ಥಾನ ಸೇರಿದಂತೆ ಹತ್ತಾರು ಪ್ರಾಚೀನ ಬೃಹತ್ ನಿರ್ಮಾಣಗಳು ದೊರೆತವು. ಸಿರಿಯನ್ ಹಾಗೂ ಈಜಿಪ್ತ್ ದಾಖಲೆ ಪ್ರಕಾರ ಬಾಲ್ಬೇಕಾ ವಾಣಿಜ್ಯ ಕ್ಷೇತ್ರದಲ್ಲಿ ಮಹತ್ವ ಗಳಿಸಿಕೊಂಡಿದ್ದ ನಗರ.

No comments: