Saturday, May 31, 2008

ಬಂದರುಗಳ ಊರು ಟೈರ್

ಟೈರ್ ಹೆಸರಿನ ಈ ಸ್ಥಳ ಲೆಬನಾನ್ ರಾಷ್ಟ್ರದ ನಾಲ್ಕನೇ ಅತಿ ದೊಡ್ಡ ನಗರ. ಈ ದೇಶದ ಪ್ರಮುಖ ಬಂದುಗಳು ಇಲ್ಲೇ ಇವೆ. ಪ್ರಮುಖ ಪ್ರವಾಸಿ ತಾಣವೂ ಹೌದು. ನಗರಕ್ಕೆ ಎರಡು ಕೇಂದ್ರಗಳಿದ್ದು, ಒಂದು ನಗರದ ವ್ಯಾಪ್ತಯಲ್ಲಿರುವ ದ್ಬೀಪದಲ್ಲಿದ್ದರೆ, ಇನ್ನೊಂದು ಕರಾವಳಿ ಭಾಗದಲ್ಲಿದೆ. ಹೆರೋಡೆಟಸ್ ಉಲ್ಲೇಖಿಸಿರುವಂತೆ ಈ ನಗರ ಕ್ರಿಸ್ತಪೂರ್ವ 2700ರಲ್ಲೇ ಸ್ಥಾಪನೆಯಾಗಿದೆ. ಕ್ರಿಸ್ತಪೂರ್ವ 1300ರ ಅವಧಿಗೆ ಸೇರಿದ ಅನೇಕ ಸ್ಮಾರಕಗಳು ಇಲ್ಲಿವೆ. ಕ್ರಿಸ್ತಪೂರ್ವ 1000ರ ವೇಳೆಯಲ್ಲಿ ಇಲ್ಲಿ ಉತ್ರತ್ತಿ ಮಾಡಲಾದ ನೇರಳೆ ಬಣ್ಣ " ಟೈರಿಯನ್ ಪರ್ಪಲ್' ಹೆಸರಿನಲ್ಲಿ ಜನಪ್ರಿಯವಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಸ್ಥಾನ ಪಡೆದುಕೊಂಡಿತು.

No comments: