Saturday, May 31, 2008

ಮನುಷ್ಯ, ಪ್ರಕೃತಿಯನ್ನು ಬೆಸೆದ ನೆಲ

ಚಂಪಸಕ್ ಪ್ರಾಂತ್ಯದಲ್ಲಿರುವ ಚಂಪಸಕ್ ನಗರ ಮತ್ತು ವಾಟ್ ಹೌ ದೇವಸ್ಥಾನ ಸಂಕೀರ್ಣ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತವೆ. ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ವಾಟ್ ಹೌ ದೇವಸ್ಥಾನ ಇಂದಿಗೂ ಸುರಕ್ಷಿತವಾಗಿವೆ. ಪರ್ವತಗಳ ಸಾಲನ್ನೇ ಬಳಸಿಕೊಂಡು, ಸುಮಾರು ಹತ್ತು ಕಿ.ಮೀ.ನಷ್ಟು ಉದ್ದಕ್ಕೆ ಗುಹೆ, ಧರ್ಮಪೀಠಗಳು, ದೇವಸ್ಥಾನಗಳು ನಿರ್ಮಾಣವಾಗಿವೆ. ಈ ಭಾಗದಲ್ಲೇ ಹರಿಯುವ ಮೆಕಾಂಗ್ ನದಿಯ ದಡದಲ್ಲಿ ಎರಡು ನಗರಗಳು ಸುವ್ಯವಸ್ಥಿತವಾಗಿ ಹಾಗೂ ಸುಯೋಜಿತವಾಗಿ ನಿರ್ಮಾಣವಾಗಿವೆ. ಖಾಮರ್ ಸಾಮ್ರಾಜ್ಯದ ಅವಧಿಯಲ್ಲಿ ಪ್ರಮುಖವಾಗಿ ಅಭಿವೃದ್ಧಿ ಕಂಡಿತು. ಕ್ರಿಸ್ತಶಕ 5ನೇ ಶತಮಾನದಿಂದ 15ನೇ ಶತಮಾನಗಳ ಅವಧಿಯಲ್ಲಿ ಕಂಡ ಬೆಳವಣಿಗೆಗಳನ್ನು ಕಾಣುತ್ತಾ ಬಂದಿದೆ.

No comments: